

27th February 2026

ಗದಗ ೨೭- ಮಹತ್ವಕಾಂಕ್ಷೆಯು ಕಾರ್ಯಕ್ಷಮತೆಯನ್ನು ಮೀರಿಸಿದಾಗ ಅದು ಹತಾಶೆಗೆ ಕಾರಣವಾಗುತ್ತದೆ. ಆದರೆ, ಕಾರ್ಯಕ್ಷಮತೆಯು ಮಹತ್ವಕಾಂಕ್ಷಿಯನ್ನು ಮೀರಿಸಿ ದಾಗ ಅದನ್ನು ಯಶಸ್ಸು ಎಂದು ಕರೆಯುತ್ತಾರೆ. ಇಂತಹ ಯಶಸ್ಸಿಗೆ ಮುನ್ನುಡಿ ಬರೆಯಲು ಎಂ. ಮಲ್ಲಿಕಾ ಅವರ ತಂಡವನ್ನು ಬೆಂಬಲಿಸಿ ಎಂದು ಕರ್ನಾಟಕ ರಾಜ್ಯ ಸರ್ವೋತ್ತಮ ಸೇವಾ ಪ್ರಶಸ್ತಿ ಪುರಸ್ಕೃತ ಸಾಹಿತಿ ಎ.ಎಸ್.ಮಕಾನದಾರ ಕರೆ ನೀಡಿದರು.
ಅವರು ರಾಜ್ಯ ಕಾರ್ಯಕಾರಿ ಸಮಿತಿಯ ಚುನಾವಣೆ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ ಮಾತನಾಡಿ ಸರ್ಕಾರಿ ನೌಕರರಲ್ಲಿ ಕರ್ತವ್ಯ ನಿಷ್ಠೆ, ಜವಾಬ್ದಾರಿ, ಸಮಯಪ್ರಜ್ಞೆ, ದಕ್ಷತೆ ಸಾರ್ವಜನಿಕ ಸೇವೆಯ ಮಹತ್ವ ಮತ್ತು ಹೊಣೆಗಾರಿಕೆ ಪಾರದರ್ಶಕವಾಗಿರಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಇಲಾಖೆಗಳಿಗಿಂತ ನ್ಯಾಯಾಂಗ ಇಲಾಖೆಯೇ ನೌಕರ ಬಂಧುಗಳು ಕಾರ್ಯದ ಒತ್ತಡ ನಡುವೆಯೂ ನಡುವೆಯೂ ಸೇವೆಗೆ ಕಂಕಣ ಬದ್ಧರಾಗಿದ್ದಾರೆ ಎಂಬುದು ದಿಟ ಎಂದರು.
ನ್ಯಾಯಾAಗ ಇಲಾಖೆಯ ಸೇವೆ ಮತ್ತು ಗುರುತರ ಜವಾಬ್ದಾರಿ ಕೂಡ ಭಿನ್ನವಾಗಿದ್ದು, ಸಾರ್ವಜನಿಕರ ಪ್ರೀತಿಗೆ ಪಾತ್ರ ರಾಗಿ ತಮ್ಮತನ ಮೆರೆಯುವ ಜೊತೆಗೆ ಇಲಾಖೆಯ ಘನತೆ ಗೌರವ ಎತ್ತಿ ಹಿಡಿಯುವ ನೌಕರರ ಬಗ್ಗೆ ಹೆಮ್ಮೆಪಡಲೇಬೇಕು.
ಆಡಳಿತ ಸೇವಕರು ನಿರ್ವಹಣಾತ್ಮಕ ಯಂತ್ರದ ಹೃದಯ ಭಾಗವೆಂದು ಸರ್ದಾರ್ ವಲ್ಲಭ ಭಾಯಿ ಪಟೇಲರು ೧೯೪೭ರಲ್ಲಿ ಹೇಳಿದ ಮಾತು ಸರ್ವಕಾಲಿಕ ಸತ್ಯ. ಜನರ ಕೆಲಸ ನನ್ನ ಕೆಲಸ ಕರ್ತವ್ಯದಲ್ಲಿ ದೇವರನ್ನು ಕಾಣುವ ನೌಕರ ಬಂಧುಗಳ ದೂರದೃಷ್ಟಿತ್ವದ ಫಲವಾಗಿ ೨೫ ವರ್ಷಗಳ ಹಿಂದೆಯೇ ಕರ್ನಾಟಕ ರಾಜ್ಯ ನ್ಯಾಯಾಂಗ ಇಲಾಖೆ ನೌಕರರ ಸಂಘ ಅಸ್ತಿತ್ವಕ್ಕೆ ಬಂತು. ಸಂಬAಧ ಮಾಸಪತ್ರಿಕೆ ನ್ಯಾಯಿಕ ಮಿತ್ರರ ಮುಖವಾಣಿಯಾಗಿ ಕಾರ್ಯನಿರ್ವಹಿಸಿದೆ ಸಂಘ ಕಟ್ಟುವಲ್ಲಿ ಅನೇಕ ಹಿರಿಯರ ಶ್ರಮ, ಬೆವರಿನ ಪಾಲು ಕೂಡ ಅಲ್ಲಗಳೆಯುವಂತಿಲ್ಲ. ಬೇರೆ ಇಲಾಖೆ ನೌಕರ ಬಂಧುಗಳ ಒಗ್ಗಟ್ಟಿನ ಮುಂದೆ ನ್ಯಾಯಂಗ ಇಲಾಖೆಯ ಒಗ್ಗಟ್ಟು ಸಂಘಟನಾ ಶಕ್ತಿ ಸ್ವಲ್ಪ ಕುಂದಿದೆ ಅಂತಲೇ ಹೇಳಬೇಕು. ಅದಕ್ಕೆಲ್ಲ ಹಲವು ಕಾರಣಗಳಿವೆ. ದಿನಾಂಕ ೨೮ ರಂದು ರಾಜ್ಯ ಕಾರ್ಯಕಾರಿ ಸಮಿತಿಯ ಚುನಾವಣೆ ಮಹತ್ವದ ಘಟ್ಟ ತಲುಪಿದೆ. ನಿನ್ನೆಯಾದೆ ಲೋಪಗಳು ನಾಳಿಗೆ ಮರುಕಳಿಸಬಾರದು ನೌಕರ ಬಂಧುಗಳ ಶ್ರೇಯಸ್ಸಿಗಾಗಿ ತಪಸ್ಸಿನ ರೀತಿಯಲ್ಲಿ ಹೋರಾಟ ಮಾಡುವ ಸಂಘದ ಸದಸ್ಯರ ಹಿತ ಕಾಯುವೆ ಪ್ರಾಮಾಣಿಕ ವ್ಯಕ್ತಿಗಳ ಕೈ ಗೆ ಅಧಿಕಾರದ ಚುಕ್ಕಾಣಿ ಕೊಡಬೇಕಿದೆ. ಹೊಸ ಕನಸುಗಳನ್ನು ನನಸು ಮಾಡಲು ಸಂಕಲ್ಪ ಹೊಂದಿರುವ ಅಭ್ಯರ್ಥಿಗಳ ಆಯ್ಕೆ ಮಾಡಬೇಕಾದರೆ ಜವಾಬ್ದಾರಿಕೂಡ ಇದೆ ಮತದಾರ ಬಂಧುಗಳು ವಿವೇಚನೆಯಿಂದ ಆತ್ಮಸಾಕ್ಷಿಯ ಅನುಗುಣವಾಗಿ ಸಮರ್ಥ ನಾಯಕತ್ವ ಗುಣದ ಅಭ್ಯರ್ಥಿಗಳ ಗೆಲುವಿಗಾಗಿ ಮತದಾನ ಮಾಡಬೇಕಾಗಿದೆ. ಸಹೋದ್ಯೋಗಿ ಬಂಧುಗಳ ನಾಡಿಮಿಡಿತ ಬಲ್ಲವರು ಹೊಸತನಕ್ಕೆ ತುಡಿಯುವ ತಾರತಮ್ಯ ನೀತಿ ದೂರತಳ್ಳುವ ಸರ್ವರನ್ನು ಸಮಾನವಾಗಿ ಕಾಣುವ ಇನ್ನೊಬ್ಬರ ಸಮಸ್ಯೆಯೇ ನಮ್ಮ ಸಮಸ್ಯೆಯೆಂದು ಅರ್ಥೈಸಿಕೊಳ್ಳುವ ಅಭ್ಯರ್ಥಿಗಳಿಗೆ ಆಯ್ಕೆ ಮಾಡುವದು ಅಗತ್ಯ.
ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ಮಹಿಳಾ ನೌಕರರ ಸಂಘದ ಉಪಾಧ್ಯಕ್ಷರಾಗಿ, ಎನ್ ಪಿ ಎಸ್ ಹೋರಾಟದ ಮುಂಚೂಣಿಯಲ್ಲಿದ್ದು ದೇಶದ ತುಂಬ ತಿರುಗಾಡಿ ನೌಕರರ ಬಂಧುಗಳಲ್ಲಿ ಜಾಗೃತಿ ಮೂಡಿಸಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಕಾರ್ಯಕಾರಿ ಸಮಿತಿಯಸದಸ್ಯರಾಗಿ ಋತುಚಕ್ರ ರಜೆ ಮಂಜೂರಾತಿಗಾಗಿ ಶ್ರಮಿಸಿ, ಕಳೆದ ಎರಡು ದಶಕಗಳಿಂದ ಹೋರಾಟದ ಹಾದಿಯಲ್ಲಿ ಕಾಲಿಗೆ ಚಕ್ರ ಕಟ್ಟಿಕೊಂಡು ಹೆಜ್ಜೆ ಹಾಕುತ್ತಿರುವ ಎಂ ಮಲ್ಲಿಕಾ ಒಬ್ಬ ಸಮರ್ಥ ನಾಯಕತ್ವ ಗುಣದ ಅಭ್ಯರ್ಥಿ ಎಂಬುದರಲ್ಲಿ ಎರಡು ಮಾತಿಲ್ಲ ಎಂದು ಅವರು ತಿಳಿಸಿದರು.
ಓ ಪಿ ಎಸ್ ಜಾರಿಗೆಗಾಗಿ ರಾಷ್ಟ್ರ ವ್ಯಾಪ್ತಿ ಹೋರಾಟ ಮಾಡಿದ್ದು ಇತಿಹಾಸ. ನ್ಯಾಯಾಂಗ ಇಲಾಖೆಯ ಬಂಧುಗಳ ಏಕರೂಪ ವೇತನ, ಇಲಾಖೆ ಬಡ್ತಿ, ಶಿಶು ಪಾಲನಾ ರಜೆ, ಖಾಲಿ ಹುದ್ದೆಗಳ ಭರ್ತಿ, ಹಿರಿಯ ಶಿರಸ್ತೇದಾರ ಹುದ್ದೆಗೆ ಪತ್ರಾಂಕಿತ ಸ್ಥಾನಮಾನ, ಅದೀನ ನ್ಯಾಯಾಲಯಗಳಲ್ಲಿ ಮೂಲಭೂತ ಸೌಲಭ್ಯಕಲ್ಪಿಸಿಕೊಡುವುದು, ಅಂತರ ಜಿಲ್ಲಾ ವರ್ಗಾವಣೆ ಪದೋನ್ನತಿ, ವಾರ್ಷಿಕ ವೈದ್ಯಕೀಯ ತಪಾಸನೆ, ಪಾರದರ್ಶಕ ಆಡಳಿತ, ಎಫ್ ಎನ್ ಜೆ ಪಿ ಸಿ ಅನುಷ್ಠಾನದಲ್ಲಿರುವ ಕೆಲ ತಾಂತ್ರಿಕ ತೊಂದರೆಗಳ ನಿವಾರಣೆ, ಅಧೀನ ನ್ಯಾಯಾಲಯಗಳ ಸಿಬ್ಬಂದಿ ಸಮಸ್ಯೆ, ಸಾಮಾಜಿಕ ನ್ಯಾಯ, ಪ್ರಾದೇಶಿಕ ನ್ಯಾಯ, ಲಿಂಗ ತಾರತಮ್ಯ ನಿವಾರಣೆ ಹೀಗೆ ಹೊತ್ತು ಹಲವಾರು ಸಮಸ್ಯೆಗಳಿಗೆ ನಾಡಿನ ತುಂಬೆಲ್ಲ ಯಾವುದೇ ಮಹಿಳಾ ನೌಕರರ ಕಷ್ಟಗಳಿಗೆ ಸ್ಪಂದಿಸುವ ತಾಯಿಗುಣ ಹೊಂದಿದವರು ಎಂ. ಮಲ್ಲಿಕಾ ಇಂತಹ ಅಪರೂಪದ ಸಂಘಟನಾ ಚತುರ ನಾಯಕಿಗೆ ನಮ್ಮ ಬೆಂಬಲ ಅವಶ್ಯವಾಗಿದೆ ಈ ಕಾರಣಕ್ಕಾಗಿ ಎಂ ಮಲ್ಲಿಕಾ ಹಾಗೂ ಅವರ ತಂಡಕ್ಕೆ ಪ್ರಚಂಡ ಬಹುಮತದಿಂದ ಆರಿಸಿ ತರಲು ನನ್ನ ಕೋರಿಕೆ ಎಂದರು.
ಅತ್ಯಾಚಾರ ಪ್ರಕರಣ ಆರೋಪಿ ಶಿಕ್ಷಕ ಮಹ್ಮದ್ ಅಜುರುದ್ಧೀನ್ ಗೆ ಜೀವಿತಾವಧಿ ಶಕ್ಷೆ- ಗಂಗಾವತಿ ಜಿಲ್ಲಾ ನ್ಯಾಯಾಲಯದಿಂದ ಆದೇಶ

ಕೊಪ್ಪಳ ತಾಲೂಕಿನಲ್ಲೂ ಅನಧಿಕೃತ ರೇಸಾರ್ಟ್ಗಳಿಗೆ- ಅಧಿಕಾರಿಗಳ ತಂಡ ದಾಳಿ: ವಿದ್ಯುತ್ ಸಂಪರ್ಕ ಕಟ್- ಜಿಲ್ಲಾಧಿಕಾರಿಗಳ ಆದೇಶ: ಗ್ರಾಪಂ ಪರವಾನಿಗೆ ರದ್ದು